ಬರೆದು ಹಾಕಿ ಚಿತ್ರಿಸಿದರೆ
ಆಗಬಹುದು ಸಾವಿರಾರು ಕಂತಿನ ಧಾರಾವಾಹಿಗಳು.
ಪಾತ್ರಧಾರಿಗಳಾಗಿ ಯಾರನ್ನು ಕರೆದು
ಉಪಚರಿಸಲಾರೆ
ಎಲ್ಲ ಪಾತ್ರಗಳ ಪರಿಚಯ ನಟನೆ
ನಾ ಮಾಡುವುದನ್ನು ಮರೆಯಲಾರೆ
ನನ್ನಲ್ಲಿ ಹಾಸುಹೊಕ್ಕಾಗಿದೆ ಎಲ್ಲ ಪಾತ್ರಗಳು
ನನ್ನ ಪಾತ್ರ ಮನಮುಟ್ಟಿತು
ಎಂದು ಹೇಳಿಸಿ ತೃಪ್ತಿಪಡೆಯುವ ಮನಸ್ಸಿಲ್ಲ ನನಗೆ
ನಾನೇನು ಮಾಡುವೆ ಎಂದು
ನೋಡಿ ಕಾಲೆಳೆದು ಬೀಳಿಸಲು
ಬರುವ ಪ್ರೇಕ್ಷಕರು ನಕ್ಕರೆ
ಅದೇ ನನಗೆ ಸಂತೋಷ.
_ ಕೂಡಕಂಡಿ ಪ್ರೀತು ರಾಜೀವ್.
No comments:
Post a Comment