ನಿನ್ನ ಪ್ರೀತಿಗೆ ನಾ
ಸಿಲುಕಬಾರದೆಂದು
ಮನಕ್ಕೆ ಬೇಲಿ ಹಾಕಿ
ಗಿಡ ನೆಟ್ಟು ಕೂತೆ.
ಈಗ ಆ ಗಿಡದಲ್ಲಿ
ನಿನ್ನ ಪ್ರೀತಿ ಹರಿದು ಬಂದು
ಹೂವುವೊಂದನು ಅರಳಿಸಿದೆ.
ಆ ಹೂವು ಕಿತ್ತು ಮುಡಿಯಲ್ಲಿ ಸಿಂಗರಿಸಲೇ....
ಒಣಗಲು ಬಿಟ್ಟು ಬೀಜ ಮಾಡಿ ಹೊಸ ಗಿಡಗಳ ಚಿಗುರಿಸಲೇ....... ತಿಳಿಯುತ್ತಿಲ್ಲ.
ಆದರೆ
ಮನಕ್ಕೆ ಇನ್ನೂ ಬೇಲಿ ಹಾಕಲಾರೆ.
-ಕೂಡಕಂಡಿ ಪ್ರೀತು ರಾಜೀವ್ .