Wednesday, 25 September 2024

ದಂಡಂ ದಶಗುಣಂ

ಸಮಾಜ ಎತ್ತ ಸಾಗುತ್ತಿದೆ?ಎಂಬ ಪ್ರಶ್ನೆ ನಮ್ಮಲ್ಲಿ ಎಲ್ಲರಿಗೂ ಕಾಡುತ್ತಿರುವ ಪ್ರಶ್ನೆ. ಉತ್ತರ ಹುಡುಕಲು ಎಲ್ಲರ ಹೋರಾಟ.... ಈಗೀನ Genration ಹಾಗೆಯೇ ಎಂಬ ಉತ್ತರಗಳು. ಹಾಗೆಯೇ ಎಂದರೆ ಹೇಗೆ? ಎಂಬ ಮತ್ತೊಂದು ಪ್ರಶ್ನೆ ?                                                               ವ್ಯಾಮೋಹಗಳ ಬಲೆಗೆ, ದುಶ್ಚಟಗಳ ಕೂಪಕ್ಕೆ ಬಿದ್ದಂತಹ ಯುವಸಮೂಹಗಳು ಒಂದೆಡೆ, ಹಿರಿಯರ ಮಾತಿಗೆ ಗೌರವ ಕೊಡದ ಮಾನವೀಯ ಮೌಲ್ಯಗಳ ಅರಿವಿಲ್ಲದಂತೆ ನಡೆಯುತ್ತಿರುವ, ಮುಗ್ಧರಂತೆ ಮುಖವಾಡ ಹಾಕಿದ ಬಾಲ್ಯ ದಾಟದ ಸಮೂಹ ನನ್ನ ಕಣ್ಣಿಗೆ ಕಾಣಿಸುತ್ತದೆ ಈ ಮೇಲಿನ ಪ್ರಶ್ನೆಗೆ ಉತ್ತರದ ರೂಪದಲ್ಲಿ.                                                           "ಬದುಕಿನ ಶೈಲಿ ದುಬಾರಿಯಾದಂತೆ ಮನುಷ್ಯರು ಅಪರಿಚಿತರಾಗುತ್ತಾರೆ." ಎಂಬ ಮಾತಿನಂತೆ ನಮ್ಮ ಯುವಸಮುದಾಯದ ಬದುಕು ದುಬಾರಿ ಶೈಲಿಯತ್ತ ವಾಲುತ್ತಿದೆ. ಗೊತ್ತಿದ್ದರೂ ಗೊತ್ತಿಲ್ಲದಂತೆ ವರ್ತಿಸುವ ಸ್ವಭಾವ,  ಬೇರೆಯವರ ಸಲಹೆ ಸ್ವೀಕರಿಸದೆ ಎಲ್ಲವೂ ನನಗೆ ಗೊತ್ತಿದೆಂಬ ಮೊಂಡುತನ, ನಗಲು ಕಷ್ಟ- ನಗಿಸಲು ಕಷ್ಟವೆಂಬ ಅಲಸ್ಯ, ಸಣ್ಣ ಸಮಸ್ಯೆಗಳಿಗೆ ಸೋತು ಹೋಗುವ ಮನಸ್ಥಿತಿ. ಇಂದು ಎಲ್ಲರೊಂದಿಗೆ ಬೆರೆತು- ಅರಿತು ನಾಳೆಗೆ ಅದೆಲ್ಲವನ್ನು ಮರೆತು ಬಾಳುವ ಹಂತಕ್ಕೆ ಬಂದು ಬಿಡುವ ಗುಣಗಳು. ಹೊಸ ವಿಷಯಕ್ಕೆ ಕಲಿಯಲು ನಿರಾಸಕ್ತಿ,,ಎದ್ದು ನಡೆಯುವಷ್ಟಕ್ಕೆ ಸೋಮಾರಿತನ.ಅಬ್ಬಬ್ಬಾ!. ಮಾತುಕಷ್ಟ. ಪ್ರೀತಿ, ಗೆಳೆತನ, ನಂಬಿಕೆ, ವಿಶ್ವಾಸ, ಕರುಣೆಗಳೆಲ್ಲವೂ ನಮಗೆ ಸಂಬಂಧಿಸಿದಲ್ಲವೆಂಬ ಅಹಂ, ನಾವು ಆಲಿಸಲು ಬಯಸುವ ಉತ್ತರಗಳಿಗೆ ಎದರುವಾದದ ಪ್ರಶ್ನೆಗಳು.. ಪಟ್ಟಿ ಮಾಡಲು ಹೊರಟರೆ ನೂರೆಂಟು..... ಯಾಕೆ ಹೀಗೆ? ನಾವು ಯಾವುದನ್ನು ನಮ್ಮ ಅಂತಸ್ತುವೆಂದು, ಆಸ್ತಿಯೆಂದು ಪರಿಗಣಿಸಿ ತಮ್ಮ ಮಕ್ಕಳು ಗಳಿಸಲು ಬಯಸುತ್ತಿರುವ ಅಂಕಪಟ್ಟಿಗಳು, ಒಂದೇ ನಮ್ಮ ಸಮಾಜ ಕಟ್ಟಲು ಸಾಧ್ಯವೇ? ಅವುಗಳು ಮುಂದೆ ನಮ್ಮ ನಮ್ಮ ಮನೆಗಳ ಗೋಡೆ ಕಟ್ಟಲು, ವಿಸ್ತರಿಸುವ ದಿಕ್ಕಿನತ್ತ ಮಾತ್ರ ಸಾಗುತ್ತವೇ ಹೊರತು ಉತ್ತಮ ಸಮಾಜ ಕಟ್ಟುವತ್ತ ಅಲ್ಲವೆಂಬುವುದನ್ನು ನಾವು ಮನಗಾಣಬೇಕಾದ ಸ್ಥಿತಿಯಿದೆ.                                   ಪ್ರಸುತ್ತ part B ಎಂದು ಪರಿಗಣಿಸಿ
ಕಲಿಸುತ್ತಿರುವ ಮಾನವೀಯ ಮೌಲ್ಯಗಳು ದೈಹಿಕ ಶಿಕ್ಷಣ, ಸಾಮಾನ್ಯ ಜ್ಞಾನ, ಸಾ. ಉ.ಉ. ಕಾ ದಂತಹ ವಿಷಯಗಳೇ ಮುಂದೊಂದು ದಿನ ನಮ್ಮ ಸಮಾಜದ ಆಸ್ತಿಗಳು ಎಂಬ ವಿಷಯಗಳು ನಮ್ಮ ಗಮನಕ್ಕೆ ಬರಬೇಕು. ಮೌಲ್ಯಗಳಿಲ್ಲದ ಉತ್ತಮ ಕಲಿಕಾ ಶ್ರೇಣಿಗಳು ಸಮಾಜಕ್ಕೆ ಸಾಕೇ? ಒಮ್ಮೆ ಯೋಚಿಸಿ. ಯುವ ಸಮೂಹಕ್ಕೆ ಜಾಗೃತಿ ಮಾಡಿಸುವ ಹಲವಾರು ಕಾರ್ಯಕ್ರಮಗಳು, ನಾವು ಹೇಳುವ ಪ್ರೀತಿಯ ಮಾತುಗಳು, ಸ್ಫೂರ್ತಿಯ ಕಥೆಗಳು ವಿದ್ಯಾರ್ಥಿ ಸಮೂಹಕ್ಕೆ ಬೇಕಿಲ್ಲದಂತಾಗಿದೆ.                                               ಸಣ್ಣ ಮಕ್ಕಳಿಗೆ ಒಳ್ಳೆಯ ಗುಣಗಳನ್ನು ಕಲಿಯಿರಿ ಎಂದು  ಬೇಡುವ ಪರಿಸ್ಥಿತಿ ನಮ್ಮ ಶಿಕ್ಷಕರ, ಪೋಷಕರ ಮತ್ತು ಸಮುದಾಯದಾಗಿದೆ. ಇದಕ್ಕೆಲ್ಲ ಉಳಿದಿರುವುದು ಒಂದೇ ದಾರಿ" ದಂಡಂ ದಶಗುಣಂ" ಅಂದುಕೊಂಡರೆ ಅದು ಕೂಡ ನಮ್ಮ ತಪ್ಪು ಕಲ್ಪನೆ.
 ಶಿಕ್ಷಕರಿಗೆ ಮತ್ತು ಪೋಷಕರಿಗೆ ದಂಡಂ ದಶಗುಣಂಗ  ಅವಕಾಶವಿಲ್ಲ ಎಂಬುದನ್ನು ಈ ಸಂದರ್ಭದಲ್ಲಿ ನಾವು ನೆನಪಿಸಿಕೊಂಡು ಸುಮ್ಮನಾಗಬೇಕಾಗಿದೆ.
ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿ ಸರಿ ಮಾಡಲಾಗದೇ ನೊಂದು ಬೆಂದು ಬಾಯಿ ಮಾತಿನಲ್ಲಿ ಮಾತ್ರ ಹೇಳಿ ಈಗಿನ ಮಕ್ಕಳನ್ನುಮುಂದೆ ಮುಂದೆ ಸಾಗಿಸಿ, ಕೊನೆಗೆ ಸಮಾಜದಲ್ಲಿ ಅವರ ತಪ್ಪಿಗೆ ಕಾನೂನಿನ ವ್ಯವಸ್ಥೆಯ ಮುಂದೆ ನಿಲ್ಲಿಸಿ ಸರಿ/ತಪ್ಪಿನ ನಿರ್ಧಾರಕ್ಕೆ ಬಿಟ್ಟುಬಿಡುವಂತಹ ಸ್ಥಿತಿಯಲ್ಲಿದ್ದೇವೆ. ಹಾಗಾದರೇ.... ಒಳ್ಳೆಯ ಸದೃಢ ಸಮಾಜ ನಿರ್ಮಾಣದ ಯುವ ಸಮುದಾಯ, ಮಕ್ಕಳು ಇಲ್ಲವೇ? ಇದ್ದಾರೆ.ಅಂತಹವರಿಂದಲೇ ನಮ್ಮ ಮುಂದಿನ ಉಜ್ವಲ ಸಮಾಜದ ಕನಸನ್ನು ನೆನಸಾಗಿಸಬಹುದು. ಯುವ ಸಮುದಾಯದ ಉತ್ತಮ ನಡೆಗೆ ಶಿಕ್ಷಕರು, ಪೋಷಕರು ಮತ್ತು ಸಮುದಾಯವು ಹೊಸ ಮಾರ್ಗಗಳನ್ನು ಹುಡುಕಬೇಕಾದ ಅನಿವಾರ್ಯತೆ ಇದೆ ಎನ್ನುವುದನ್ನು ನಾವು ಒಪ್ಪಲೇ ಬೇಕು.                                               --                                                               ಕೂಡಕಂಡಿ ಪ್ರೀತು ರಾಜೀವ್,                                     ಬೇರಂಬಾಣೆ.