ಕಲಿಸುತ್ತಿರುವ ಮಾನವೀಯ ಮೌಲ್ಯಗಳು ದೈಹಿಕ ಶಿಕ್ಷಣ, ಸಾಮಾನ್ಯ ಜ್ಞಾನ, ಸಾ. ಉ.ಉ. ಕಾ ದಂತಹ ವಿಷಯಗಳೇ ಮುಂದೊಂದು ದಿನ ನಮ್ಮ ಸಮಾಜದ ಆಸ್ತಿಗಳು ಎಂಬ ವಿಷಯಗಳು ನಮ್ಮ ಗಮನಕ್ಕೆ ಬರಬೇಕು. ಮೌಲ್ಯಗಳಿಲ್ಲದ ಉತ್ತಮ ಕಲಿಕಾ ಶ್ರೇಣಿಗಳು ಸಮಾಜಕ್ಕೆ ಸಾಕೇ? ಒಮ್ಮೆ ಯೋಚಿಸಿ. ಯುವ ಸಮೂಹಕ್ಕೆ ಜಾಗೃತಿ ಮಾಡಿಸುವ ಹಲವಾರು ಕಾರ್ಯಕ್ರಮಗಳು, ನಾವು ಹೇಳುವ ಪ್ರೀತಿಯ ಮಾತುಗಳು, ಸ್ಫೂರ್ತಿಯ ಕಥೆಗಳು ವಿದ್ಯಾರ್ಥಿ ಸಮೂಹಕ್ಕೆ ಬೇಕಿಲ್ಲದಂತಾಗಿದೆ. ಸಣ್ಣ ಮಕ್ಕಳಿಗೆ ಒಳ್ಳೆಯ ಗುಣಗಳನ್ನು ಕಲಿಯಿರಿ ಎಂದು ಬೇಡುವ ಪರಿಸ್ಥಿತಿ ನಮ್ಮ ಶಿಕ್ಷಕರ, ಪೋಷಕರ ಮತ್ತು ಸಮುದಾಯದಾಗಿದೆ. ಇದಕ್ಕೆಲ್ಲ ಉಳಿದಿರುವುದು ಒಂದೇ ದಾರಿ" ದಂಡಂ ದಶಗುಣಂ" ಅಂದುಕೊಂಡರೆ ಅದು ಕೂಡ ನಮ್ಮ ತಪ್ಪು ಕಲ್ಪನೆ.
ಶಿಕ್ಷಕರಿಗೆ ಮತ್ತು ಪೋಷಕರಿಗೆ ದಂಡಂ ದಶಗುಣಂಗ ಅವಕಾಶವಿಲ್ಲ ಎಂಬುದನ್ನು ಈ ಸಂದರ್ಭದಲ್ಲಿ ನಾವು ನೆನಪಿಸಿಕೊಂಡು ಸುಮ್ಮನಾಗಬೇಕಾಗಿದೆ.
ಬೆಳೆಯುವ ಸಿರಿಯನ್ನು ಮೊಳಕೆಯಲ್ಲಿ ಸರಿ ಮಾಡಲಾಗದೇ ನೊಂದು ಬೆಂದು ಬಾಯಿ ಮಾತಿನಲ್ಲಿ ಮಾತ್ರ ಹೇಳಿ ಈಗಿನ ಮಕ್ಕಳನ್ನುಮುಂದೆ ಮುಂದೆ ಸಾಗಿಸಿ, ಕೊನೆಗೆ ಸಮಾಜದಲ್ಲಿ ಅವರ ತಪ್ಪಿಗೆ ಕಾನೂನಿನ ವ್ಯವಸ್ಥೆಯ ಮುಂದೆ ನಿಲ್ಲಿಸಿ ಸರಿ/ತಪ್ಪಿನ ನಿರ್ಧಾರಕ್ಕೆ ಬಿಟ್ಟುಬಿಡುವಂತಹ ಸ್ಥಿತಿಯಲ್ಲಿದ್ದೇವೆ. ಹಾಗಾದರೇ.... ಒಳ್ಳೆಯ ಸದೃಢ ಸಮಾಜ ನಿರ್ಮಾಣದ ಯುವ ಸಮುದಾಯ, ಮಕ್ಕಳು ಇಲ್ಲವೇ? ಇದ್ದಾರೆ.ಅಂತಹವರಿಂದಲೇ ನಮ್ಮ ಮುಂದಿನ ಉಜ್ವಲ ಸಮಾಜದ ಕನಸನ್ನು ನೆನಸಾಗಿಸಬಹುದು. ಯುವ ಸಮುದಾಯದ ಉತ್ತಮ ನಡೆಗೆ ಶಿಕ್ಷಕರು, ಪೋಷಕರು ಮತ್ತು ಸಮುದಾಯವು ಹೊಸ ಮಾರ್ಗಗಳನ್ನು ಹುಡುಕಬೇಕಾದ ಅನಿವಾರ್ಯತೆ ಇದೆ ಎನ್ನುವುದನ್ನು ನಾವು ಒಪ್ಪಲೇ ಬೇಕು. -- ಕೂಡಕಂಡಿ ಪ್ರೀತು ರಾಜೀವ್, ಬೇರಂಬಾಣೆ.