Saturday, 8 February 2020

ಬತ್ತದಿರಲಿ ಉತ್ಸಾಹ


 ನನ್ನ ಬೆರಳೆಣಿಕೆಯಷ್ಟು  ಆತ್ಮೀಯ
 ಗೆಳೆಯರಲ್ಲಿ 
ಕಾಜೂರು ಸತೀಶ್ ಅವರು ಕೂಡ ಒಬ್ಬರು.
ನಾನು ಬರೆಯುವ  ಸಣ್ಣಪುಟ್ಟ ಬರಹಕ್ಕೆ ಸಲಹೆಗಾರರವರು. ಅವರ ಕಾವ್ಯದಲ್ಲಿನ ಸೂಕ್ಷ್ಮತೆ,ಮಾತಿನಲ್ಲಿನ ಪ್ರಬುದ್ಧತೆ  ಮತ್ತು ಅವರು ಹಲವಾರು ಉತ್ತಮ ಹವ್ಯಾಸಗಳಲ್ಲಿ ತೋರುವ ಆಸಕ್ತಿ ಅವರ ಒಡನಾಟದಲ್ಲಿ ಇರುವ ಎಲ್ಲರನ್ನು ಬೆರಗುಗೊಳಿಸುವಂತಹದು.ಪ್ರಕಟಗೊಂಡ ಅವರ ಎರಡು ಕವನ ಸಂಕಲನಗಳು ಕೂಡ ಪ್ರಶಸ್ತಿಗೆ ಭಾಜನವಾಗಿವೆ ಎನ್ನುವುದು ಹೆಮ್ಮೆಯ ವಿಷಯ.


ಅಂತಹ
ಯುವಕವಿಯಾದ ಕಾಜೂರು ಸತೀಶ್ ಅವರು ಈ ಸಾಲಿನ 85ನೇ ಅಖಿಲ ಭಾರತ ಕನ್ನಡಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗೆ ಆಯ್ಕೆಯಾಗಿ ರಜೆ ಸಿಗದ ಕಾರಣ ಹೋಗಲು ಸಾಧ್ಯವಾಗಲಿಲ್ಲ ಎಂಬುವುದು ಅವರದೇ ಇಲಾಖೆಯಲ್ಲಿ ದುಡಿಯುವ ನನಗೆ ಬೇಸರ ತಂದಿರುವ ವಿಷಯ.ಒಂದು ತಿಂಗಳ ಹಿಂದೆಯೇ ಸಮ್ಮೇಳನಕ್ಕೆ ಹೋಗುವೇ ಎಂದು ಹೇಳಿದ್ದ ಯುವಕವಿಯ ಉತ್ಸಾಹ ಕಸಿದುಕೊಂಡಿದ್ದು ವಿಷಾದನೀಯ.ಸಾಹಿತ್ಯದಲ್ಲಿ ಆಸಕ್ತಿಯಿರುವರಿಗೆಲ್ಲ ಇದು ನೋವಿನ ಸಂಗತಿ.ಯಾವ ಸನ್ಮಾನಗಳಿಗೆ ಆಸೆಪಡದ ,
ಹೊಗಳಿಕೆ ಮತ್ತು ತೆಗಳಿಕೆಗಳಿಗೆ ಬಾಗದ ವ್ಯಕ್ತಿತ್ವ ಅವರದು.
 ಅದೇ  ವ್ಯಕ್ತಿತ್ವ  ಮುಂದೊಂದು  ದಿನ ಇದಕ್ಕಿಂತ ದೊಡ್ಡದಾದ ವೇದಿಕೆ ಅವರಿಗೆ ಕಲ್ಪಿಸುತ್ತದೆ ಎಂಬ ನಂಬಿಕೆ ನನ್ನಲ್ಲಿದೆ. ಬತ್ತದಿರಲಿ ನಿಮ್ಮ ಉತ್ಸಾಹ.ಶುಭವಾಗಲಿ ಎಂದು ಹಾರೈಸುವೆ.
          - ಕೂಡಕಂಡಿ ಪ್ರೀತು ರಾಜೀವ್.

No comments:

Post a Comment