Wednesday, 23 December 2020

ಎಷ್ಟು ಚಂದದ ಊರು ಅದು.ಎತ್ತ ನೋಡಿದರೂ ಬೆಟ್ಟಗುಡ್ಡ.ದೂರ ದೂರದಲ್ಲಿ  ತಲೆ ಮಾತ್ರ ತೋರಿಸುವ  ಮನೆಗಳು.ಆ ನಿಸರ್ಗದ ಸೌಂದರ್ಯದ ಮುಂದೆ ನಾನು ಸೋತು ಹೋಗಿದ್ದೆ.ಮೈ ಕೊರೆಯುವ ಚಳಿ,ತಂಪಾದ ಗಾಳಿ.ಅದೇ ಕೊಡಗಿನ ಮಡಿಕೇರಿ ತಾಲೂಕಿನ ಹಮ್ಮಿಯಾಲ-ಮುಟ್ಲು.ಈ ಸಲದ ಗ್ರಾಮ ಪಂಚಾಯಿತಿ ಚುನಾವಣಾ ಕಾರ್ಯಕ್ಕೆ ನನಗೆ ಸಿಕ್ಕಿದ ಮತಗಟ್ಟೆ ಕೇಂದ್ರ.



ಮಾಂದಲಪಟ್ಟಿ ಮಾರ್ಗದಲ್ಲಿ ಸಾಗಿದಾಗ ಕೊಡಗಿನವಳಾಗಿ ನಾನೇ ಆ ಪಕೃತಿಯ ಸೌಂದರ್ಯಕ್ಕೆ ಮರುಳಾದೆ ಅಂದರೆ ,ಹೊರಗಡೆ ಬರುವ ಪ್ರವಾಸಿಗರ ಸಂಖ್ಯೆಹೆಚ್ಚು ಅಂದರೆ  ಆಶ್ಚರ್ಯಪಡಬೇಕಾದ ವಿಷಯವಲ್ಲ.ಅಲ್ಲಿ ಈಗಿನ ಮಕ್ಕಳೆಲ್ಲ ಕೆಲಸಕ್ಕೆನಗರದ ಕಡೆ ಮುಖ ಮಾಡಿ  ಹೋಗಿರುವ ಕಾರಣ,ವಯಸ್ಸಾದವರೇ ಹೆಚ್ಚು ಅಲ್ಲಿ ಇರುವಂತೆ ಕಾಣುತ್ತಿತ್ತು. ಜನರ ಸಂಪರ್ಕ ನಗರದೊಂದಿಗೆ ಕಡಿಮೆ    ಇರುವಂತಹ ಊರು ಅದು.ಮತಗಟ್ಟೆಗೆ ಹೋಗುವ ಮೊದಲು ದೂರದ ಊರು  ಮತ್ತು ಜನರ ಬಗ್ಗೆ ಒಳ್ಳೆಯ ಅಭಿಪ್ರಾಯವೇನು ಹಲವರಿಂದ   ಬರದ ಕಾರಣ ಅಂಜಿಕೆಯಿಂದಲೇ ಹೋದ ನಮ್ಮ ತಂಡಕ್ಕೆ ಅಲ್ಲಿಯ  ಜನರ  ಗೌರವ ,ನಡವಳಿಕೆ ಮತ್ತು ಅವರ ಸಹಾಯಾಕ ಮನೋಭಾವ ಕಂಡು,ಯಾವ ವಿಷಯ ಹಾಗೂ 
ಯಾರ ಬಗ್ಗೆಯೂ ಪೂರ್ವಗ್ರಹಪೀಡಿತ ದೃಷ್ಟಿಕೋನದಿಂದ ನೋಡಬಾರದೆಂದು ಅನಿಸಿದಂತು ನಿಜ.ಒಳ್ಳೆಯ ತಂಡದೊಂದಿಗೆ ಹೋಗಿ,ಸುಮಧುರ ನೆನಪುಗಳನ್ನು ಕಟ್ಟಿಕೊಂಡು ಅಲ್ಲಿಂದ ಬಂದ ನಾನು,ಸಮಯ ಮಾಡಿಕೊಂಡು ಮತ್ತೊಂದು ಸಲ ಆ ಪ್ರಕೃತಿಯ ಸೌಂದರ್ಯ
 ನೋಡಲು ಕುಟುಂಬದೊಂದಿಗೆ ಹೋಗಲೇ ಬೇಕು.
           _ಕೂಡಕಂಡಿ ಪ್ರೀತು ರಾಜೀವ್.

2 comments:

  1. This comment has been removed by a blog administrator.

    ReplyDelete
  2. ನಿಜ.ಅಲ್ಲಿಯ ಪ್ರಕೃತಿ ಸೌಂದರ್ಯಕ್ಕೆ ಮಾರುಹೋಗದವ ಮನುಷ್ಯನಾಗಲು ಸಾದ್ಯವೇ ಇಲ್ಲ.ನಿಮ್ಮ ಅಭಿಪ್ರಾಯದಂತೆ ಅರಿಯುವ ಮೊದಲು ಯಾವ ಕಾರಣಕ್ಪೂಕೂ ರ್ವಗ್ರಹಪೀಡಿತರಾಗಬಾರದು.

    ReplyDelete