ಮುಗಿದು ನಡೆಯಲು ಶಕ್ತಿವಿರುವ ರಾಜಕಾರಣಿಗಳಿಗೆ ಇಂತಹ ಪ್ರವಾಹದ ಸಮಯದಲ್ಲಿ ಬರಲು ಶಕ್ತಿಯೂ ಇಲ್ಲ.ಮನಸ್ಸು ಇಲ್ಲ ಎಂದೆನಿಸುತ್ತದೆ.ವೈಮಾನಿಕ ಸಮೀಕ್ಷೆಯಲ್ಲಿ ನೊಂದವರ ಕಣ್ಣೀರು ಕಾಣಿಸುವುದಿಲ್ಲ.ಶೋಕತಪ್ತರ ಅಳು ಕೇಳಿಸುವುದಿಲ್ಲ.ಕೊಳೆತ ಹೆಣ,ಕೃಷಿ ಭೂಮಿಯ ವಾಸನೆಯೂ ಬರುವುದಿಲ್ಲ.ಹಾಯಾಗಿ ಕುಳಿತು ವರದಿ ನೀಡಿ ಹಣದಲ್ಲಿ ಎಲ್ಲವನ್ನು ಅಳೆಯುವ ನೀತಿ ನೋಡಿ ಖೇದವಾಗುತ್ತದೆ.
ನಾಡನ್ನು ನಡುಗಿಸಿದ ಪ್ರವಾಹದ ಭೀತಿಯಲ್ಲಿ ಸೊರಗಿದ ಜನರಿಗೆ ಸಿಗುವ ಸೌಲಭ್ಯಗಳು ಸರಿಯಾಗಿ ಸಿಕ್ಕುವ ನಂಬಿಕೆಯೂ ಇಲ್ಲ ಬಿಡಿ.ಎಲ್ಲವೂ ರಾಜಕೀಯ.ನಮಗೆ ನೆರವಾಗಲು
ನಾವು ಬೇರವರಿಗೆ ನೆರವಾಗುವ ಗುಣವೊಂದೇ ನಮಗೆ ಸಹಾಯ ಮಾಡುವುದು.ಅರಮನೆಯಲ್ಲಿ ಇದ್ದರೂ ನೆರೆಮನೆ ಬೇಕೆಂಬ ಗಾದೆ ನಿಜಕ್ಕೂ ಸತ್ಯ.
- ಕೂಡಕಂಡಿ ಪ್ರೀತು ರಾಜೀವ್.
No comments:
Post a Comment