Wednesday, 12 November 2025

ಪ್ರೀತಿಯ ಚಿಗುರು

ನಿನ್ನ ಪ್ರೀತಿಗೆ ನಾ
ಸಿಲುಕಬಾರದೆಂದು
ಮನಕ್ಕೆ ಬೇಲಿ ಹಾಕಿ
ಗಿಡ ನೆಟ್ಟು ಕೂತೆ.
ಈಗ ಆ ಗಿಡದಲ್ಲಿ
ನಿನ್ನ ಪ್ರೀತಿ ಹರಿದು ಬಂದು
ಹೂವುವೊಂದನು ಅರಳಿಸಿದೆ.
             
ಆ  ಹೂವು ಕಿತ್ತು ಮುಡಿಯಲ್ಲಿ ಸಿಂಗರಿಸಲೇ....
ಒಣಗಲು ಬಿಟ್ಟು ಬೀಜ ಮಾಡಿ ಹೊಸ ಗಿಡಗಳ ಚಿಗುರಿಸಲೇ....... ತಿಳಿಯುತ್ತಿಲ್ಲ.
ಆದರೆ
ಮನಕ್ಕೆ  ಇನ್ನೂ ಬೇಲಿ  ಹಾಕಲಾರೆ.  
        
   -ಕೂಡಕಂಡಿ ಪ್ರೀತು ರಾಜೀವ್ .                                             

3 comments: